ಪ್ರತಿ ರೈತರಿಗೆ 2000 ಬರ ಪರಿಹಾರ ಘೋಷಣೆ

Naveen
0

 ಬರ ಘೋಷಿತ 223 ತಾಲೂಕುಗಳ ರೈತರಿಗೆ ಮೊದಲ ಕಂತಿನಲ್ಲಿ ಗರಿಷ್ಠ 2 ಸಾವಿರ ರೂ.ವರೆಗೆ ಬೆಳೆ ನಷ್ಟ ಪರಿಹಾರ ಕೊಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು.


ರಾಜ್ಯದ 236 ತಾಲೂಕುಗಳ ಪೈಕಿ ಎನ್‌ಡಿಆರ್‌ಎಫ್ ಮಾರ್ಗಸೂಚಿಯ ಪ್ರಕಾರ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. 48.19 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ನಷ್ಟ ಆಗಿದೆ. 18,171.44 ಕೋಟಿ ರೂ. ಆರ್ಥಿಕ ನೆರವಿಗಾಗಿ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದೇವೆ. ಕೇಂದ್ರದ ಪರಿಹಾರಕ್ಕೆ ಕಾಯದೆ ಮುಂಗಡವಾಗಿ ನಾವೇ ಪರಿಹಾರ ಮೊತ್ತ ಬಿಡುಗಡೆ ಮಾಡುತ್ತಿದ್ದೇವೆ ಎಂದು ಗುರುವಾರ ಗೃಹಕಚೇರಿ “ಕೃಷ್ಣಾ”ದಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಅವರು ವಿವರ ನೀಡಿದರು.


* ಯಾವಾಗ ರೈತರ ಖಾತೆಗೆ ಮೊದಲ ಕಂತಿನ ಪರಿಹಾರ ಹಣ ಬರುತ್ತದೆ??

ಅರ್ಹ ರೈತರಿಗೆ ಎರಡು ಸಾವಿರ ರು.ವರೆಗೆ ಪರಿಹಾರ ನೀಡಲು ರಾಜ್ಯ ಸರಕಾರ ನಿರ್ಧಾರ

ಬರ: ಮೊದಲ ಕಂತಿನ ಬೆಳೆಹಾನಿ ಪರಿಹಾರ

ಬೆಂಗಳೂರು: ಬರ ಪರಿಹಾರ ಬಿಡುಗಡೆ ಮಾಡಲು ಕೇಂದ್ರದ ನೆರವಿಗಾಗಿ ಕಾಯುತ್ತಿದ್ದ ರಾಜ್ಯ ಸರಕಾರ, ಈವರೆಗೆ ನೆರವು ಬಾರದೇ ಇರುವುದರಿಂದ ರಾಜ್ಯದ ವತಿಯಿಂದಲೇ 2,000 ರು. ವರೆಗೆ ಬೆಳೆ ಪರಿಹಾರ ವಿತರಿಸಲು ಮುಂದಾಗಿದೆ.

• ಯಾವ ತಾಲೂಕಿಗೆ ಎಷ್ಟು ಬರ ಪರಿಹಾರ ಬರುತ್ತದೆ??

ಮುಂದಿನ ನಾಲೈದು ದಿನದಲ್ಲಿ ಅರ್ಹ ರೈತರಿಗೆ ಹಣ ವರ್ಗಾವಣೆ ಪ್ರಕ್ರಿಯೆ ಆರಂಭ!

223 ತಾಲೂಕು ಗಳಲ್ಲಿನ ಅರ್ಹ ರೈತರ ಬಗ್ಗೆ ಮಾಹಿತಿ ಪಡೆದು ಪರಿಹಾರ ವಿತರಣೆ ಶುರು

• ರಾಜ್ಯದಲ್ಲಿ ಭೀಕರ ಬರವಿದ್ದರೂ, ಕೇಂದ್ರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ನಮ್ಮ ರೈತರು ಹಾಗೂ ಜನರನ್ನು ಉಳಿಸುವ ಕೆಲಸವನ್ನು ಸರಕಾರ ಮಾಡಬೇಕಿದೆ. ಆದ್ದರಿಂದ ಕೇಂದ್ರದಿಂದ ಹಣ ಬರುವ ತನಕ ಕಾಯದೆ, ರಾಜ್ಯ ಸರಕಾರ ಮೊದಲ ಕಂತು ಬಿಡುಗಡೆ ಮಾಡಿದೆ.

ತುರ್ತು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸರಕಾರಕ್ಕೆ ನಾನು ಸೇರಿದಂತೆ ಸಂಪುಟ ಸಚಿವರು ಹಲವು ಬಾರಿ ಪತ್ರ ಬರೆದು, ಎನ್‌ಡಿಆ‌ರ್.ಎಫ್ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇವೆ. ರಾಜ್ಯದಿಂದ ಮೂವರು ಸಚಿವರು ದೆಹಲಿಗೆ ಹೋದರೂ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಕೇಂದ್ರ ಸರಕಾರ ಈವರೆಗೆ ರಾಜ್ಯದ ರೈತರಿಗೆ ಪರಿಹಾರ ಕೊಡಲು ಇನ್ನೂ ಪ್ರಾಥಮಿಕ ಸಭೆಯನ್ನೇ ನಡೆಸದ ಹಿನ್ನೆಲೆಯಲ್ಲಿ ಇದೀಗ ರಾಜ್ಯ ಸರಕಾರದ ಕಡೆಯಿಂದಲೇ ಮೊದಲ ಕಂತಿನಲ್ಲಿ ಅರ್ಹ ರೈತರಿಗೆ ತಲಾ 2000 ರು. ವರೆಗೆ ಬೆಳೆ ಪರಿಹಾರ ಹಣ ನೀಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

ನಮ್ಮ ರೈತರಿಗೆ ಸಮಸ್ಯೆ ಆಗಬಾರದು ಎಂದು ನಾವೇ ಮೊದಲ ಕಂತಿನಲ್ಲಿ ತಲಾ 2 ಸಾವಿರ ರೂ.ವರೆಗೆ ಮುಂಗಡ ಪರಿಹಾರ ನೀಡಲು ನಿರ್ಧರಿಸಿದ್ದೇವೆ, ನಾಲ್ಕೈದು ದಿನಗಳಲ್ಲಿ ಈ ಬಗ್ಗೆ ಆದೇಶ ಹೊರಬೀಳ ಲಿದೆ. ಸದ್ಯಕ್ಕೆ ಜಮೀನಿನ ಅಳತೆ ಆಧಾರದ ಮೇಲೆ ನಷ್ಟವಾಗಿರುವ ಬೆಳೆಯ ಪ್ರಮಾಣ ಆಧರಿಸಿ ಪರಿಹಾರ ಕೊಡಲಾಗುತ್ತದೆ. ಫ್ರೂಟ್ಸ್‌ ತಂತ್ರಾಂಶದ ಮೂಲಕ ನೋಂದಣಿ ಮಾಡಿಕೊಂಡಿರುವ ರೈತರ ಸಹಿತ ಜಿಲ್ಲಾಧಿ ಕಾರಿಗಳಿಂದ ವರದಿ ಪಡೆದು ರೈತರ ಬ್ಯಾಂಕ್‌ ಖಾತೆಗೆ ನೇರವಾಗಿ ಹಣ ಜಮೆ ಮಾಡಲಾಗುತ್ತದೆ. ಕೇಂದ್ರ ಸರಕಾರ ಕೊಡುವ ಪರಿಹಾರ ಕಡಿಮೆಯಾದರೆ ಅಂತಿಮ ಕಂತಿನಲ್ಲಿ ರಾಜ್ಯ ಸರಕಾರವೇ ವ್ಯತ್ಯಾಸ ಸರಿಪಡಿಸಲು ಕೂಡ ತೀರ್ಮಾನಿಸಿದೆ ಎಂದು ಭರವಸೆ ನೀಡಿದರು.

Post a Comment

0 Comments
* Please Don't Spam Here. All the Comments are Reviewed by Admin.
Post a Comment (0)

#buttons=(Accept !) #days=(20)

Our website uses cookies to enhance your experience. Learn More
Accept !
To Top